ತನ್ನ 6 ಕೋಟಿ ಗ್ರಾಹಕರಿಗೆ 49 ರೂಪಾಯಿಯ One Time Free ಆಫರ್ ಪರಿಚಯಿಸಿದೆ ಈ ಕಂಪನಿ

Vodafone Idea offer: ಈ ಯೋಜನೆಯಲ್ಲಿ, 38 ರೂ. ಟಾಕ್ ಟೈಮ್ ಮತ್ತು 100 ಎಂಬಿ ಡೇಟಾ ಸೌಲಭ್ಯವನ್ನು ನೀಡಲಾಗುವುದು ಮತ್ತು ಇದು 28 ದಿನಗಳ ಮಾನ್ಯತೆಯನ್ನು ಹೊಂದಿರುತ್ತದೆ.

Written by - Yashaswini V | Last Updated : May 19, 2021, 08:45 AM IST
  • 49 ರೂಪಾಯಿಯ ಈ ಯೋಜನೆಯಲ್ಲಿ, 38 ರೂ. ಟಾಕ್ ಟೈಮ್ ಮತ್ತು 100 ಎಂಬಿ ಡೇಟಾ ಸೌಲಭ್ಯವನ್ನು ನೀಡಲಾಗುವುದು
  • 79 ರೂಪಾಯಿಗಳ ಯೋಜನೆಯಲ್ಲಿ ಸುಮಾರು ಎರಡು ಪಟ್ಟು ಲಾಭ
  • ಈ ಹಿಂದೆ, ಜಿಯೋ ಮತ್ತು ಏರ್‌ಟೆಲ್ ಕಂಪನಿಗಳು ಆಯ್ದ ಗ್ರಾಹಕರಿಗೆ ಇಂತಹ ಪರಿಹಾರ ಯೋಜನೆಗಳನ್ನು ಪ್ರಕಟಿಸಿವೆ
ತನ್ನ 6 ಕೋಟಿ ಗ್ರಾಹಕರಿಗೆ 49 ರೂಪಾಯಿಯ One Time Free ಆಫರ್ ಪರಿಚಯಿಸಿದೆ ಈ ಕಂಪನಿ title=
Best Recharge Plans

Vodafone Idea offer: ಖಾಸಗಿ ಟೆಲಿಕಾಂ ಕಂಪನಿ ವೊಡಾಫೋನ್ ಐಡಿಯಾ (Vi) ತನ್ನ ಸುಮಾರು ಆರು ಕೋಟಿ ಕಡಿಮೆ ಆದಾಯದ ಗ್ರಾಹಕರಿಗೆ ಉಚಿತ 49 ರೂಪಾಯಿ ಯೋಜನೆ (Vi Rs 49 plan) ನೀಡುವುದಾಗಿ ಘೋಷಿಸಿತು. ಪಿಟಿಐ ಸುದ್ದಿಯ ಪ್ರಕಾರ, ವೊಡಾಫೋನ್ ಐಡಿಯಾ ಸಾಂಕ್ರಾಮಿಕ ಸಮಯದಲ್ಲಿ, ಗ್ರಾಹಕರಿಗೆ ಸಂಪರ್ಕದಲ್ಲಿರಲು ಸಹಾಯ ಮಾಡಲು ಈ ಒಂದು-ಬಾರಿ ಸೌಲಭ್ಯವನ್ನು ಘೋಷಿಸಲಾಗಿದೆ.

79 ರೂಪಾಯಿಗಳ ಯೋಜನೆಯಲ್ಲಿ ಸುಮಾರು ಎರಡು ಪಟ್ಟು ಲಾಭ  (Nearly double benefit on plan of 79 rupees):
ಸುದ್ದಿಯ ಪ್ರಕಾರ, ವೊಡಾಫೋನ್ ಐಡಿಯಾ  (Vodafone Idea) ಹೇಳಿಕೆಯೊಂದರಲ್ಲಿ ಈ ಮಾಹಿತಿಯನ್ನು ನೀಡಿದ್ದು, ಈ ಗ್ರಾಹಕರು ತಮ್ಮ ಮೊಬೈಲ್ ಸೇವೆಗಾಗಿ 79 ರೂಪಾಯಿ ಮೌಲ್ಯದ ಯೋಜನೆಯನ್ನು ಖರೀದಿಸಿದರೆ, ಇದರಿಂದ ಅವರು ಸುಮಾರು ಎರಡು ಪಟ್ಟು ಲಾಭ ಪಡೆಯುತ್ತಾರೆ ಎಂದು ತಿಳಿಸಿದೆ. ಈ ಹಿಂದೆ, ಜಿಯೋ ಮತ್ತು ಏರ್‌ಟೆಲ್ ಕಂಪನಿಗಳು ಆಯ್ದ ಗ್ರಾಹಕರಿಗೆ ಇಂತಹ ಪರಿಹಾರ ಯೋಜನೆಗಳನ್ನು ಪ್ರಕಟಿಸಿವೆ.

ಇದನ್ನೂ ಓದಿ- ಮನೆಯಲ್ಲಿದ್ದುಕೊಂಡೇ ಫಟಾಪಟ್ ನಿಮ್ಮ ಹಳೆಯ ಸ್ಮಾರ್ಟ್‍ಫೋನ್ ಸೇಲ್ ಮಾಡಿ..!

ಉಚಿತ ಯೋಜನೆಗೆ 294 ಕೋಟಿ ರೂ.  (Free plan costs Rs 294 crore):
ಆರು ಕೋಟಿ ಗ್ರಾಹಕರಿಗೆ ಕಂಪನಿ ಘೋಷಿಸಿರುವ 49 ರೂ. ರೀಚಾರ್ಜ್ ಯೋಜನೆಗೆ (Recharge Plans) 294 ಕೋಟಿ ರೂ. ವೆಚ್ಚವಾಗಲಿದೆ. ಪ್ರಸ್ತುತ ಕಷ್ಟದ ಸಂದರ್ಭಗಳಲ್ಲಿ ವಿ (Vi) ತನ್ನ ಸುಮಾರು ಆರು ಕೋಟಿ ಕಡಿಮೆ ಆದಾಯದ ಗ್ರಾಹಕರಿಗೆ 49 ರೂ.ಗಳ ಪ್ಯಾಕ್ ಅನ್ನು ಉಚಿತವಾಗಿ ನೀಡಲಿದೆ ಎಂದು ಕಂಪನಿ ಹೇಳಿಕೆಯಲ್ಲಿ ತಿಳಿಸಿದೆ. ಈ ಯೋಜನೆಯಲ್ಲಿ, 38 ರೂ. ಟಾಕ್ ಟೈಮ್ ಮತ್ತು 100 ಎಂಬಿ ಡೇಟಾದ ಸೌಲಭ್ಯ ನೀಡಲಾಗುವುದು ಮತ್ತು ಇದು 28 ದಿನಗಳ ಮಾನ್ಯತೆಯನ್ನು ಹೊಂದಿರುತ್ತದೆ ಎನ್ನಲಾಗಿದೆ. 

ಈ ಅರ್ಪಣೆಯೊಂದಿಗೆ, ವಿ (Vi) ತನ್ನ ಗ್ರಾಹಕರು ಅವರ ಪ್ರೀತಿ ಪಾತ್ರರೊಂದಿಗೆ ಸುರಕ್ಷಿತವಾಗಿ ಸಂಪರ್ಕ ಹೊಂದುತ್ತಾರೆ ಎಂದು ಆಶಿಸುವುದಾಗಿ ತಿಳಿಸಿದೆ.

ಇದನ್ನೂ ಓದಿ- ಮಂಗಳನ ಮೇಲೊಂದು ಮೆಗಾಸಿಟಿ ಯಾವಾಗ ನಿರ್ಮಾಣವಾಗುತ್ತೆ ಗೊತ್ತಾ..?

ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಆರ್ಥಿಕ ಒತ್ತಡದಲ್ಲಿ ಏರ್‌ಟೆಲ್ (Airtel is under financial pressure) :
ಕೋವಿಡ್ -19 ರ ಎರಡನೇ ತರಂಗದಲ್ಲಿ ಕಂಪನಿಯು ಆರ್ಥಿಕ ಒತ್ತಡವನ್ನು ಎದುರಿಸುತ್ತಿದೆ. ಆದರೆ ಶೀಘ್ರದಲ್ಲೇ ಪರಿಸ್ಥಿತಿ ಚೇತರಿಸಿಕೊಳ್ಳುವ ನಿರೀಕ್ಷೆಯಿದೆ ಎಂದು ಭಾರತಿ ಏರ್‌ಟೆಲ್  (Bharti Airtel) ಸಿಇಒ ಹೇಳಿದರು. ಸಾಂಕ್ರಾಮಿಕ ರೋಗದಿಂದಾಗಿ ತನ್ನ 13 ಸಹೋದ್ಯೋಗಿಗಳನ್ನು ಕಳೆದುಕೊಂಡಿದ್ದೇನೆ ಮತ್ತು ಅದು ಪರಿಣಾಮ ಬೀರಿದೆ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ (ಭಾರತ ಮತ್ತು ದಕ್ಷಿಣ ಏಷ್ಯಾ) ಗೋಪಾಲ್ ವಿಟ್ಟಲ್ ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News